Tuesday, April 1, 2014

ಹಿಂದೂ ಸಂಘಟನೆ ಕಾರ್ಯಕರ್ತ ರಾಜೇಶ್ ಹಂತಕರ ಸೆರೆ

ಹಿಂದೂ ಸಂಘಟನೆ ಕಾರ್ಯಕರ್ತ ರಾಜೇಶ್ ಹಂತಕರ ಸೆರೆ
ಕೆಎಫ್‍ಡಿ ಕಾರ್ಯಕರ್ತರಾದ ಇರ್ಫಾನ್, ಇರ್ಷಾದ್ ಮತ್ತು ಹುಸೈನ್ ಪೋಲಿಸ್ ಬಲೆಗೆ
10 ದಿನಗಳಲ್ಲಿ ಪ್ರಕರಣ ಬೇಧಿಸಿದ ಪೊಲೀಸರು!
ಬಂಧಿತ ಆರೋಪಿಗಳನ್ನು ನೀರುಮಾರ್ಗ ನಿವಾಸಿಗಳಾದ ಇರ್ಫಾನ್, ಇರ್ಷಾದ್ ಮತ್ತು ಹುಸೈನ್ ಎಂದು ಗುರುತಿಸಲಾಗಿದ್ದು, ಕೊಲೆ ನಡೆಸಲು ಸಹಕಾರ ಹಾಗೂ ಕುಮ್ಮಕ್ಕು ನೀಡಿದ ಆರೋಪಿಗಳನ್ನು ಪತ್ತೆಹಚ್ಚಲು ಕಾರ್ಯಾಚರಣೆ ಮುಂದುವರಿದಿದೆ. ಪ್ರಕರಣದ ಹೆಚ್ಚಿನ ತನಿಖೆ ನಡೆಯಬೇಕಾಗಿರುವುದರಿಂದ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಕೇಳಲಾಗುವುದು ಎಂದು ಸರ್ಕಲ್ ಇನ್ಸ್‍ಪೆಕ್ಟರ್ ರಾಜಶೇಖರ್ ಮೇಸ್ತ್ರಿ ತಿಳಿಸಿದ್ದಾರೆ.
ಬಜರಂಗದಳ ಸೇರಿದಂತೆ ಹಲವಾರು ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ರಾಜೇಶ್, ಬಿ.ಸಿ.ರೋಡಿನಲ್ಲಿ ಬಸ್ ಏಜೆಂಟ್‍ನಾಗಿದ್ದ. 2008ರಲ್ಲಿ ನಡೆದ ಇಕ್ಬಾಲ್ ಕೊಲೆ ಪ್ರಕರಣದ ಆರೋಪಿಯಾಗಿದ್ದ. ಪ್ರಕರಣದಲ್ಲಿ ಬಂಧಿಸಲ್ಪಟ್ಟ ಈತ ನ್ಯಾಯಾಲಯದಲ್ಲಿ ದೋಷಮುಕ್ತನಾಗಿ ಬಿಡುಗಡೆಯಾಗಿದ್ದ. ಗುರುಪುರ, ಕಂದಾವರ ನಿವಾಸಿ, ರಿಕ್ಷಾ ಚಾಲಕ ರಫೀಕ್ ಕೊಲೆ ಪ್ರಕರಣದಲ್ಲೂ ಈತನ ಹೆಸರು ಕೇಳಿಬಂದಿತ್ತು. ಹಿಂದು ಕಾರ್ಯಕರ್ತ ಎನ್ನುವ ಕಾರಣಕ್ಕಾಗಿ ಹಿಂದೊಮ್ಮೆ ಅ್ಯಟ್ಯಾಕ್‍ಗೆ ಗುರಿಯಾಗಿದ್ದ. ಮುಸ್ಲಿಂ ರಿಕ್ಷಾ ಚಾಲಕರ ಕೊಲೆ ಪ್ರಕರಣದ ಬಳಿಕ ಮುಸ್ಲಿಂ ಮೂಲಭೂತ ಸಂಘಟಕರ ಕೆಂಗಣ್ಣಿಗೆ ಗುರಿಯಾಗಿದ್ದ ರಾಜೇಶ್ ಮೇಲೆ ಹಲವು ಬಾರಿ ಸ್ಕೆಚ್ ನಡೆದಿದ್ದವು. ಈ ಮಧ್ಯೆ ಬಂಟ್ವಾಳ ಪೊಲೀಸರು ರೌಡಿಶೀಟರ್‍ಗೆ ಈತನನ್ನು ಸೇರಿಸಿದ್ದರು.
 ಪೊಲೀಸ್ ಕೇಸುಗಳನ್ನು ಹೆಗಲಿಗೇರಿಸಿ ಮಾನಸಿಕ ಖಿನ್ನತೆಗೊಳಗಾಗಿದ್ದ ರಾಜೇಶ್ ಕೆಲವು ವರ್ಷಗಳಿಂದ ಕ್ರೈಂ ಚಟುವಟಿಕೆಗಳಿಂದ ದೂರವಾಗಿದ್ದ. ಸಂಘಟನೆಗಳ ಸಹವಾಸಕ್ಕೂ ವಿರಾಮ ಹಾಕಿದ್ಧ. ಬೆಂಜನಪದವಿನಲ್ಲಿ ವಾಸ್ತವ್ಯ ಹೂಡಿದ್ದು, ಹೊಟ್ಟೆಪಾಡಿಗಾಗಿ ರಿಕ್ಷಾವೊಂದರಲ್ಲಿ ದುಡಿಯುತ್ತಿದ್ದ. ಈ ದುಡಿಮೆಯೇ ಆತನ ಬಾಳಿಗೆ ಮುಳುವಾಗಿತ್ತು. ಮಾ. 21ರಂದು ಬೆಳಿಗ್ಗೆ 6.45ರ ವೇಳೆ ಮನೆಯಿಂದ ಹೊರಟ ರಾಜೇಶ್‍ನನ್ನು ಕಲ್ಪನೆ ರಿಕ್ಷಾ ಸ್ಟ್ಯಾಂಡ್ ಸಮೀಪ ಅಡ್ಡಗಟ್ಟಿದ ದುಷ್ಕರ್ಮಿಗಳು ಬರ್ಬರವಾಗಿ ಕೊಲೆಗೈದಿದ್ದರು. ಬಳಿಕ ಪಲ್ಸಾರ್ ಬೈಕ್‍ನಲ್ಲೇ ಸ್ಥಳದಿಂದ ಪರಾರಿಯಾಗಿದ್ದರು. ರಾಜೇಶ್ ಕೊಲೆ ಇಕ್ಬಾಲ್ ಹತ್ಯೆಯ ಪ್ರತೀಕಾರ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಪ್ರಾಥಮಿಕ ತನಿಖೆ ಆರಂಭಿಸಿದ್ದರು. ಬಂಟ್ವಾಳ ಡಿವೈಎಸ್ಪಿ ರಶ್ಮಿ ಪರಡಿ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ರಾಜಶೇಖರ್ ಮೇಸ್ತ್ರಿ ನೇತೃತ್ವ ವಿಶೇಷ ತಂಡ ರಚಿಸಲಾಗಿತ್ತು. ಗ್ರಾಮಾಂತರ ಎಸ್‍ಐ ಸಂಜಯ್ ಕುಮಾರ್ ಮತ್ತು ಸಿಬ್ಬಂದಿ ರಾಜೇಶ್ ಹತ್ಯೆ ಪ್ರಕರಣವನ್ನು ಬೇಧಿಸಿದೆ.
 ಗಡುವು ಮುನ್ನವೇ ಬಂಧನ:
 ಹಿಂದು ಕಾರ್ಯಕರ್ತ ರಾಜೇಶ್ ಕೊಲೆ ಪ್ರಕರಣವನ್ನು ತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧಿಸುವಂತೆ ಹಿಂದು ಜಾಗರಣ ವೇದಿಕೆ ಸೇರಿದಂತೆ ಇಲ್ಲಿನ ಹಿಂದು ಸಂಘಟನೆಗಳು ಪೊಲೀಸ್ ಅಧಿಕಾರಿಗಳು ಮನವಿ ಸಲ್ಲಿಸಿದ್ದರು. ಬಂದ್ ಆಚರಿಸಿ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದರು. ಆದರೆ ಚುನಾವಣೆಯ ಹಿತದೃಷ್ಟಿ ಯಲ್ಲಿ ಈ ಕಾರ್ಯಕ್ರಮಗಳಿಗೆ ಅವಕಾಶ ನೀಡಿರಲಿಲ್ಲ. ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸ್ ಅಧಿಕಾರಿಗಳು ಗಡುವು ನೀಡಿದ್ದರು. ಅವರು ಪ್ರಕಟಿಸಿದ ಗುಡುವಿಗೆ ಮುನ್ನವೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

No comments:

Post a Comment